ದಿನಾಂಕ: 20.09.2014 ರಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಸಂಸ್ಥೆಯವರು ಆಧುನಿಕ ತಂತ್ರಜ್ಞಾನ ಒಳಗೊಂಡ ಉಪಗ್ರಹ ಆಧಾರಿತ ಶಿಕ್ಷಣ ಕಾರ್ಯಕ್ರಮಗಳನ್ನು ಸಾಕಾರಗೊಳಿಸುವ ಸಲುವಾಗಿ Satellite GSAT-3/Satellite INSAT-4CR ಉಪಗ್ರಹವನ್ನು ಉಡಾವಣೆ ಮಾಡಿರುತ್ತಾರೆ.  ರಾಷ್ಟ್ರದ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಉಪಗ್ರಹ ಮೂಲಕ ಪ್ರಸಾರ ಮಾಡುವ ದೂರ-ಶಿಕ್ಷಣ ಪರಿಕಲ್ಪನೆಯಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಿರುತ್ತಾರೆ.  ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು ಎರಡು SIT Channel ಹಾಗೂ ಎರಡು ROT Channels ಗಳು EDUSAT ಕಾರ್ಯಕ್ರಮಗಳಿಗೆ ಲಭ್ಯವಿದ್ದು, ಇವರುಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ಕೂಡಿ ಒಂದು ROT Channel ಅನ್ನು ಬಳಸುತ್ತಿದ್ದೇವೆ.
ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗಳ ಸಹಭಾಗಿತ್ವದಲ್ಲಿ ಎಜುಸ್ಯಾಟ್ ಬ್ರಾಡ್ ಕ್ಯಾಸ್ಟ್ ಸ್ಟುಡಿಯೋ ಅನ್ನು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯ ಆವರಣದಲ್ಲಿ ಅನುಸ್ಥಾಪಿಸಲಾಗಿದೆ. ಕಾರ್ಯಕ್ರಮ ಸ್ವೀಕರಣಾ ಉಪಕರಣಗಳನ್ನು (Receive only Terminal-ROT equipment) ಅನುಸ್ಥಾಪಿಸಿರುವ 327 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎಜುಸ್ಯಾಟ್ ವ್ಯವಸ್ಥೆಯು ಅನುಸ್ಥಾಪಿತವಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಎಜುಸ್ಯಾಟ್ ಉಪಗ್ರಹ ಆಧಾರಿತ ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಉದ್ಯೋಗವಕಾಶಗಳನ್ನು ಕಲ್ಟಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಬ್ಯಾಂಕ್ ನೇಮಕಾತಿ, ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ, ಕೇಂದ್ರ ಲೋಕ ಸೇವಾ ಆಯೋಗದ ನೇಮಕಾತಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಬಂಧಿಸಿದಂತೆ ವ್ಯಕ್ತಿತ್ವ ನಿರ್ಮಾಣ, ಕಂಪ್ಯೂಟರ್ ಕುರಿತ ಮೂಲಭೂತ ವಿಷಯಗಳು, ಇಂಗ್ಲಿಷ್ ಭಾಷೆಯಲ್ಲಿ ಸಂವಾದದ ಇತ್ಯಾದಿ ಉಪಯುಕ್ತ ವಿಷಯಗಳ ಕುರಿತು ಉಪಗ್ರಹ ಆಧಾರಿತ ಎಜುಸ್ಯಾಟ್ ಕಾರ್ಯಕ್ರಮವು ಪ್ರತಿನಿತ್ಯ ಪ್ರಸಾರಗೊಳ್ಳುತ್ತಿವೆ.
ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ತನ್ನ ಕ್ಯಾಂಪಸ್ನಲ್ಲಿ HUB ನ ಸ್ಥಾಪಿತವಾಗಿದೆ ಮತ್ತು ಈ ಕೆಳಗಿನ ವಿಳಾಸದಲ್ಲಿ ಇದೆ.
    # 4, 100ft ರಿಂಗ್ ರೋಡ್
    ಬನಶಂಕರಿ 3 ನೇ ಹಂತ
    ಔಟರ್ ರಿಂಗ್ ರೋಡ್, ಹೊಸಕೆರೆಹಳ್ಳಿ ಲೇಔಟ್
    ಬೆಂಗಳೂರು, ಕರ್ನಾಟಕ 560085
ಎಜುಸಾಟ್ ಬ್ರಾಡ್ಕಾಸ್ಟ್ ಸ್ಟುಡಿಯೋವನ್ನು ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಜಂಟಿಯಾಗಿ ನಡೆಸಲಾಗುತ್ತದೆ.
ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಹಾಗೂ ಪ್ರದೇಶದ ಜಿ.ಎಫ್.ಆರ್ ಹೆಚ್ಚಿಸಲು ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಹಕಾರದೊಂದಿಗೆ ಹೈದ್ರಾಬಾದ್- ಕರ್ನಾಟಕ ಪ್ರದೇಶದಲ್ಲಿನ 64 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳೂ ಸೇರಿದಂತೆ ಇಲಾಖಾ ವ್ಯಾಪ್ತಿಯ 73 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಟೆಲಿ-ಶಿಕ್ಷಣ ಯೋಜನೆಯನ್ನು ..ಎಂ ಬೆಂಗಳೂರು ಮತ್ತು ಅದರ ಒಕ್ಕೂಟ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ.

ಉಪಗ್ರಹದ ತಾಂತ್ರಿಕ ನಿಯತಾಂಕಗಳು ಪ್ರಸ್ತುತ ಟೆಲಿ ಶಿಕ್ಷಣ ಕಾರ್ಯಕ್ರಮಕ್ಕಾಗಿ ಬಳಸಲಾಗುತ್ತದೆ:
  1.ಉಪಗ್ರಹ ಹೆಸರು: INSAT 4CR
  2.ಆವರ್ತನ (ಕು-ಬ್ಯಾಂಡ್): 11.680 GHz
  3.ಸಂಕೇತ ದರ: 2968
  4.ಧ್ರುವೀಯತೆ: ಲಂಬ
 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.
ಎಜುಸಾಟ್ ಮೂಲಕ  ಟೆಲಿ- ಶಿಕ್ಷಣ ಉಪಗ್ರಹ ಆಧಾರಿತ ಇ-ಶಿಕ್ಷಣ:ಜ್ಞಾನತರಂಗ