ಇಂದಿನ ಜಾಗತಿಕ ಪರಿಸರದಲ್ಲಿ ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪದವೀಧರರಾದೊಡನೆ ವಿಶ್ವದಾದ್ಯಂತ ಲಭ್ಯವಿರುವ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸಮರ್ಥರಾಗಬೇಕು. ಈ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ 2014-15ನೇ ಸಾಲಿನಲ್ಲಿ ಎಲ್ಲ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗ ಕೋಶಗಳನ್ನು ಸ್ಥಾಪಿಸಿತು.
ಉದ್ಯೋಗಕೋಶಗಳನ್ನು ಪ್ರಾರಂಭಿಸುವುದರ ಜೊತೆಗೆ ಇಲಾಖೆ ಉದ್ಯೋಗ ಕೋಶ ಸಮಿತಿಗಳ ರಚನೆಯ ಕುರಿತು ಮಾರ್ಗಸೂಚಿಗಳನ್ನು, ವರ್ಷದಾದ್ಯಂತ ಇವುಗಳ ಮೂಲಕ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ವಿವರವನ್ನು ಮತ್ತು ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಹಾಗೂ ಉದ್ಯೋಗಮೇಳಗಳ ಕುರಿತ ಸುತ್ತೋಲೆಗಳನ್ನು ಹೊರಡಿಸುತ್ತಿದೆ. ಇದರೊಂದಿಗೆ ಉದ್ಯೋಗಕೋಶಗಳ ಉಪಕ್ರಮಗಳ ಪ್ರಗತಿ ಪರಿಶೀಲನೆಯನ್ನೂ ಮಾಡಲಾಗುತ್ತಿದೆ. ಸ.ಪ್ರ.ದ.ಕಾಲೇಜುಗಳಲ್ಲಿ ಉದ್ಯೋಗಕೋಶಗಳು ಹಮ್ಮಿಕೊಳ್ಳುವ  ಕಾರ್ಯಕ್ರಮಗಳ ಪ್ರಾಮುಖ್ಯತೆ, ಉನ್ನತ ಶಿಕ್ಷಣ ಮತ್ತು ನ್ಯಾಕ್ ಮಾನ್ಯತಾ ಪ್ರಕ್ರಿಯೆಯಲ್ಲಿ ಉದ್ಯೋಗ ಕೋಶಗಳ ಪಾತ್ರ ಇವೇ ಮೊದಲಾದ ವಿಷಯಗಳ ಕುರಿತ ಹಲವು ಕಾರ್ಯಾಗಾರಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಕಾಲೇಜುಗಳ ಪ್ರಾಂಶುಪಾಲರಿಗೆ, ಉದ್ಯೋಗ ಕೋಶಗಳ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಂಚಾಲಕರಿಗೆ ಹಾಗೂ ಬೋಧಕವರ್ಗದವರಿಗಾಗಿ ಸಂಘಟಿಸಲಾಗುತ್ತಿದೆ.
ಸಂದರ್ಶನವನ್ನು ಎದುರಿಸಲು ಅಗತ್ಯವಾದ ಸಲಹೆಗಳು, ರೆಸ್ಯೂಮೆ ರಚನೆ, ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಕುರಿತ ಮಾಹಿತಿ, ಕಾರ್ಪೊರೇಟ್ ವಲಯದಲ್ಲಿನ ಉದ್ಯೋಗಗಳು, ಸ್ವ-ಉದ್ಯೋಗ ಇವೇ ಮೊದಲಾದ ವಿಷಯಗಳ ಕುರಿತು ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ  ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.
ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಿಂದ   IAS, IPS, IRS,  KAS ಇವೇ ಮೊದಲಾದ ನಾಗರಿಕ ಸೇವಾ ಪರೀಕ್ಷೆಗಳು, ಪ್ರೊಬೇಷನರಿ ಆಫೀಸರ್ಸ್ ಪರೀಕ್ಷೆಗಳು ಮುಂತಾದ ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯ ಜೊತೆಗೆ ತರಬೇತಿಯನ್ನೂ ನೀಡಲಾಗುತ್ತಿದೆ.
 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.